ಹರೆಯ vs ಮುಪ್ಪು

*ಹರೆಯ vs ಮುಪ್ಪು*


ಹರೆಯದಲ್ಲಿ ಮುಖದಲ್ಲಿನ 

ಮೊಡವೆಗಳ ಚಿಂತೆ

ಮುಪ್ಪಿನಲ್ಲಿ ಕಣ್ಣ ಸುತ್ತ ಆವರಿಸಿದ ನೆರಿಗೆಗಳ ಚಿಂತೆ


ಬಾಲ್ಯದಲ್ಲಿ ಅಮ್ಮನ ಕೈ ಹಿಡಿಯುಲು ಕಾಯುತ್ತಿದ್ದೆ

ಮುಪ್ಪಿನಲ್ಲಿ ಯಾರಾದರೂ ನನ್ನ ಕೈ ಹಿಡಿಯಲೆಂದು ಕಾಯುತ್ತಿರುವೆ..


ಹರೆಯದಲ್ಲಿ ಒಂಟಿಯಾಗಿರಲು ಬಯಸುತ್ತಿದ್ದೆ

ಮುಪ್ಪಿನಲ್ಲಿ ಯಾಕಾದರೂ ಒಂಟಿಯಾಗಿರುವೆನೋ ಎನ್ನಿಸುತ್ತಿದೆ..


ಯೌವನದಲ್ಲಿ ಯಾರ ಉಪದೇಶವೂ ನನಗೆ ಬೇಕಿರಲಿಲ್ಲ..

ಮುಪ್ಪಿನಲ್ಲಿ ಉಪದೇಶಿಸುವವರಿಲಿ

ಮಾತಾಡಲೂ ಯಾರೂ ಇಲ್ಲ..


ಹರೆಯದಲ್ಲಿ ಸುಂದರವಾದ ವಸ್ತುಗಳನ್ನು ಮಾತ್ರ ಆರಾಧಿಸುತ್ತಿದ್ದೆ..

ಮುಪ್ಪಿನಲ್ಲಿ ಪ್ರತಿ ವಸ್ತುವಿನಲ್ಲೂ ಸುಂದರತೆ ಕಾಣುತ್ತಿದೆ..


ವಯಸ್ಸಿನ ಹುರುಪಿನಲ್ಲಿ ನಾನು ಎಂದೆಂದಿಗೂ ಅಮರ ಎಂದು ತಿಳಿದಿದ್ದೆ..

ಆದರೀಗ ಮುಪ್ಪಿನಲ್ಲಿ ನನ್ನ ಸರದಿಗಾಗಿ ಕಾಯುತ್ತಿರುವೆ..


ಹರೆಯದಲ್ಲಿ ಪ್ರತಿ ಕ್ಷಣವನ್ನೂ ಸಂತೋಷದಿಂದ ಕಳೆಯುತ್ತಿದ್ದೆ..

ಈಗ ಮುಪ್ಪಿನಲ್ಲಿ ಆ ಕ್ಷಣಗಳನ್ನು ನೆನೆದು ಜೀವಿಸುತ್ತಿರುವೆ..


ಹರೆಯದಲ್ಲಿ ನಿದ್ದೆಯಿಂದ ಏಳುವುದೇ ಕಷ್ಟವೆನಿಸುತ್ತಿತ್ತು..

ಮುಪ್ಪಿನಲ್ಲಿ ನಿದ್ದೆಗಾಗಿ ಕಾತರಿಸುತ್ತಿದ್ದೇನೆ..


ಹರೆಯದಲ್ಲಿ ನನ್ನ ಹೃದಯ ಇನ್ನೊಬ್ಬರಿಗಾಗಿ ಮಿಡಿಯುವ ಆತಂಕ..

ಮುಪ್ಪಿನಲ್ಲಿ ನನ್ನ ಹೃದಯ ಎಂದು ನಿಲ್ಲುವುದೋ ಎಂಬ ಆತಂಕ..

 

ಜೀವನದುದ್ದಕ್ಕೂ ಬರೀ ಆತಂಕಗಳೇ ತುಂಬಿದೆಯಲ್ಲ..

ಜೀವನವನ್ನು ಅನುಭವಿಸಬೇಕೆಂದು ತಿಳಿಯದೇ ಹೋಯಿತಲ್ಲ..


ನಾವು ಹರೆಯದವರೋ ಮುದುಕರೋ ಎಂದು ಚಿಂತಿಸುವ ಬದಲು..

ಪ್ರತಿ ಕ್ಷಣವನ್ನೂ ಅನುಭವಿಸೋಣ..

ಜೀವನವನ್ನು ಪ್ರೀತಿಸೋಣ..!!


-ಪೂವಿಕೃ (ಭಾವಾನುವಾದ)

Comments

Popular Posts