ತುಂತುರು ಕವನ - ೭

ಅಮೂಲ್ಯ ಮುತ್ತು


ಕಿವಿಗೆ ಓಲೆಯ ಭಾರ

ಮೂಗಿಗೆ ಮೂಗುತಿ ಭಾರ

ಹಣೆಗೆ ಸಿಂಧೂರ ಭಾರ

ಕತ್ತಿಗೆ ಮಾಂಗಲ್ಯದ ಭಾರ


ಕಾಲಿಗೆ ಗೆಜ್ಜೆಯ ಭಾರ

ಕಾಲ್ಬೆರಳಿಗೆ ಕಾಲುಂಗುರದ ಭಾರ

ತಲೆಗೆ ಜಡೆಯ ಭಾರ

ಮುಡಿಗೆ ಮಲ್ಲಿಗೆಯ ಭಾರ


ವಯಸ್ಸಿನಲ್ಲಿ ಯೌವನದ ಭಾರ

ಬಸುರಿಯಲ್ಲಿ ಮಗುವಿನ ಭಾರ

ತಾಯ್ತನದಲ್ಲಿ ಮಕ್ಕಳ ಭಾರ

ಜೀವನಪೂರ್ತಿ ಸಂಸಾರ ಭಾರ


ಈ ಎಲ್ಲ ಭಾರಗಳನು ಹೊತ್ತು

ನಡೆಯುವವಳ ಬಗ್ಗೆ ನಿಮಗೆಷ್ಟು ಗೊತ್ತು?

ಅಲಕ್ಷಿಸದಿರಿ ಹೆಣ್ಣನು ಯಾವತ್ತೂ

ಹೆಣ್ತನವೆಂಬುದು ಅಮೂಲ್ಯ ಮುತ್ತು !

ಹೆಣ್ತನವೆಂಬುದು ಅಮೂಲ್ಯ ಮುತ್ತು !!

-ಪೂವಿಕೃ

Comments

Popular Posts