ತುಂತುರು ಕವನ -೬

ನೆನಪು!!


ಅವರ ಆಸರೆಯೇ ನಮಗೆ ಬಲವಾಗಿತ್ತು

ಅವರ ಮಾತುಗಳೇ ನಮಗೆ ಬೆಂಬಲವಾಗಿತ್ತು


ಅವರ ಇರುವಿಕೆಯೇ ನಮಗೆ ಶಕ್ತಿಯಾಗಿತ್ತು

ಅವರ ಪ್ರೀತಿಯೇ ನಮಗೆ ವರವಾಗಿತ್ತು


ಅವರ ಅಗಲುವಿಕೆಯಿಂದ ಅಪಾರ ನೋವಾಗಿತ್ತು

ಅವರಿಲ್ಲದೇ ಮನೆಗೆ/ಮನಕೆ ಕತ್ತಲಾವರಿಸಿತ್ತು


ಈ ಒಂದು ವರ್ಷದಲ್ಲಿ ಬರೀ ನೆನಪುಗಳಿತ್ತು

ಅವರಿಲ್ಲದೆಯೂ ಬದುಕುವ ಶಕ್ತಿ ಮೈಗೂಡಿತು


ಹೌದು

ಯಾರಿಲ್ಲದೆಯೂ ನಡೆವುದೀ ಬದುಕು

ಆದರೂ ಬಿಡದೇ ಕಾಡುವುದಲ್ಲ ಅವರ ನೆನಪು!!


-ಪೂವಿಕೃ

Comments

Popular Posts