Skip to main content

Posts

Featured

ಗುಜರಾತ್ ಪ್ರವಾಸ ಕಥನ ಕವನ!!

ಒಂದೆಡೆ ಪೌರಾಣಿಕ ಮತ್ತೊಂದೆಡೆ ಐತಿಹಾಸಿಕ.. ಇನ್ನೊಂದೆಡೆ ಜಾಗತಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ! ಎಲ್ಲ ಮಹತ್ವಗಳೂ ಮೇಳೈಸಿದ ಈ ಯಾತ್ರೆ.. ಸಾರಿತು ಭವ್ಯ ಭಾರತದ ಚರಿತ್ರೆ ! ಬೆಂಗಳೂರಿಂದ ಜಾಮ್ನಗರ ಸೇರಿದೆವು ವಯಾ ಮುಂಬಯಿ ಸ್ವಾಗತಿಸಿದರು ಅಲ್ಲಿನ ವ್ಯವಸ್ಥಾಪಕರು  ಮಿಲಾಯಿಸಿ ಕೈಯಿ ಪ್ರಪಂಚದ ಬೃಹತ್ ಪೆಟ್ರೋಲಿಯಮ್ ಶುದ್ಧೀಕರಣ ಘಟಕ ವೀಕ್ಷಿಸಿದೆವು  ಬರಡು ಜಾಗವನ್ನು ಹಸಿರಾಗಿಸಿದ ಅದ್ಭುತವನ್ನೂ ನೋಡಿದೆವು ಅಲ್ಲಿಂದ ಹೊರಟು ಸೇರಿದೆವು ದ್ವಾರಕೆ ಶ್ರೀಕೃಷ್ಣನ ವೈಭವೋಪೇತ ಆಸ್ಥಾನಕೆ! ನೂಕುನುಗ್ಗಲಿನ ಮಧ್ಯೆ ದರ್ಶಿಸಿದೆವು ಕೃಷ್ಣನ ಮುದ್ದು ಮುಖ.. ಅಲ್ಲಿನ ಜನರ ಭಕ್ತಿಪರವಶತೆಗೆ ಮನವಾಯ್ತು ಮೂಕ! ಮಾರನೆ ದಿನ ಸಾಗಿದೆವು ದೋಣೆಯಲಿ ಶ್ರೀಕೃಷ್ಣನ ಅರಮನೆಗೆ (ಬೆಟ್ ದ್ವಾರಕ) ಬೇಸರವಾಯ್ತು ಅಲ್ಲಿನ ಜನ ಕಂಡಲ್ಲಿ ಪಾನ್ ಉಗಿಯುವ ಚಾಳಿಗೆ! ಕಂಡೆವು ಕೃಷ್ಣನ ಅರಮನೆಯಲ್ಲಿ ರಾಣಿಯರ ವಾಸ ಕೃಷ್ಣ ಸುಧಾಮರು ಬೇಟಿಯಾದ ನಿವಾಸ  ಅಲ್ಲಿಂದ ಹೊರಟೆವು ನೋಡಲು ನಾಗೇಶ್ವರ ಪಕ್ಕದಲ್ಲೇ ಕುಳಿತಿದ್ದ ಬೃಹದಾಕಾರದ ಈಶ್ವರ! ಸಂಜೆಗೆ ನೋಡಿದೆವು ಶಿವರಾಜ್ ಪುರ ಸಮುದ್ರ ತೀರದಲ್ಲಿ ಸೂರ್ಯಾಸ್ತಮಾನ ಒಂಟೆಯ ಮೇಲೆ ಸವಾರಿ ದೋಣಿ ವಿಹಾರದ ನಂತರ ಕಂಡೆವು ಪ್ರತ್ಯೇಕ ರುಕ್ಮಿಣಿ ಭವನ ಚೆನ್ನಾಗಿತ್ತು ಹೋಟೆಲ್ ರೋಮ ಕ್ರಿಸ್ಟೋ ನಲ್ಲಿನ ಊಟ ಉಪಚಾರ ಬಿಲ್ಲು ಪಾವತಿಸುವಾಗಲೇ ಗೊತ್ತಾಗಿದ್ದು ಜೇಬಿನ ಸಂಚಕಾರ ! ಅಲ್ಲಿಂದ ತೆರಳಿದೆವು ಪೋರಬಂದರ್ ಗೆ ಗಾಂಧೀಜಿಯವರ ಜನ್ಮಸ್ಥಳದ ವೀಕ್ಷಣೆಗೆ

Latest posts

ಅಮ್ಮನ ಹುಡುಕಾಟ...

ಮಾನಿನಿಯರ ಔಟಿಂಗು!!

ಆ ಐದು ದಿನಗಳು!!

ಕೊರೋನಾ ಕೊರೋನಾ

ಸಂಸಾರದಲ್ಲಿ ಸರಿಗಮ

ಇಲ್ಲೇ ಕಳ್ಕೊಂಡೆ!!

ನಾವ್ ಅಡುಗೆ ಮಾಡೋದಿಲ್ಲ..

ಚುಟುಕುಗಳು

SRDT ರಥ!!

ಕಾಯಕವೇ ಕೈಲಾಸ