ಮಾನಿನಿಯರ ಔಟಿಂಗು!!

ಒಂದು ದಿನ ಮೀಟಿಂಗ್ ನಲ್ಲಿ
ಶುರುವಾಯ್ತು ನಮ್ ಚಾಟಿಂಗು
ಮಾನಿನಿಯರೆಲ್ಲ ಒಕ್ಕೊರಲಿನಿಂದ
ಪ್ಲಾನ್ ಮಾಡಿದ್ರು ಔಟಿಂಗು..

ಮಾನಿನಿಯರಿಗೆ ಸಪೋರ್ಟ್ ಮಾಡಿದ್ರು
ಅವರವರ್ ಹಬ್ಬೀಸ್ ಎಲ್ಲಾ..
ಅಣ್ಣತಮ್ಮಂದಿರು ಜೊತೆಯಾಗ್ ಬಂದ್ರು…
ನಮ್ ಖುಷೀಗೆ ಪಾರವೇ ಇಲ್ಲಾ!!

ಔಟಿಂಗು ಅಂತ ಅಂದಾಗ್ಲಿಂದ
ಶುರುವಾಯ್ತಲ್ಲಾ ಶಾಪಿಂಗು!
ಜೀನ್ಸ್ ಹಾಕೇ ಹಾಕ್ತೀವಿ ಅಂತ
ಎಲ್ರೂ ಜಂಪಿಂಗೋ ಜಂಪಿಂಗು!!

ಗಗನಚುಕ್ಕಿ ಭರಚುಕ್ಕಿಗಿಂತ
ಸ್ಪೀಡ್ ಆಗಿತ್ತು ಇವರ ಥಿಂಕಿಂಗು!
ತಲಕಾಡಲ್ಲಿ ಆಟ ಆಡಕ್ಕೆ
ಶುರುವಾಗಿತ್ತು ಎಲ್ಲಾ ಪ್ಲಾನಿಂಗು!

ಹೊರಡೋ ದಿನ ಬೆಳಿಗ್ಗೆ ಅಂತೂ
ಎಲ್ರೂ ಸಕ್ಕತ್ ಚಾರ್ಮಿಂಗು..
ಕಲರ್ ಕಲರ್ ಬಟ್ಟೆಗಳ ತೊಟ್ಟು
ಎಲ್ರೂ ಮಿಂಚಿಂಗೋ ಮಿಂಚಿಂಗು!

ಮೊದಲ ಬ್ರೇಕ್ ಮಳವಳ್ಳಿ ಹತ್ರ
ಬ್ರೇಕ್ ಫಾಸ್ಟ್ ಗಾಗಿ ಸ್ಟಾಪಿಂಗೂ
ಉಪ್ಪಿಟ್ಟು ಕೇಸರಿಬಾತ್ ತಿಂದು
ಸ್ಟ್ರಾಂಗ್ ಕಾಫಿ ಡ್ರಿಂಕಿಂಗೂ!!

ಅಲ್ಲಿಂದ ಮುಂದಕ್ಕೆ ಹೊರಟು
ಶಿವನಸಮುದ್ರ ರೀಚಿಂಗು
ಗೆಸ್ಟ್ ಹೌಸ್ ನಲ್ಲಿ ರಿಫ್ರೆಶ್ ಆಗಿ
ಫಾಲ್ಸ್ ಹತ್ರಕ್ಕೆ ಗೋಯಿಂಗು..

ಸಾಹೇಬ್ರಿಗಾಗಿ ಕಾದಿತ್ತು ಎಲ್ಲಾ ಕಡೆ ವಾರ್ಮ್ ವೆಲ್ಕಮ್ಮೂ
ಪೋಲೀಸ್ ಬಂದೋಬಸ್ತಲ್ಲಿ ಓಡಾಡಿದ್ವಿ yes, ನಮ್ದೇ ಕಿಂಗ್ಡಮ್ಮು!

ಜಲಪಾತದ ಸೊಬಗು ಕಣ್ತುಂಬಿಕೊಂಡ್ವಿ 
ವರ್ಣಿಸಕ್ಕೆ ಇಲ್ಲ ವರ್ಡ್ಸೂ
ಎಲ್ಲಾ ಕಡೆ ಸೆಲ್ಫೀ ತಗೊಂಡ್ವಿ
ಬಿಡ್ತೀವಾ ಇಂಥಾ ಚಾನ್ಸೂ??

ತಲಕಾಡಲ್ಲಿ ಊಟ ಮಾಡಕ್ಕೆ
ಗೆಸ್ಟ್ ಹೌಸ್ ಬುಕ್ ಆಗಿತ್ತು
ಎಲ್ರೂ ಸೇರ್ದಾಗ ಮಾತು ಹರಟೆ
ನಗುವಿಗೇನ್ ಕಮ್ಮಿ ಇತ್ತು??

ಬಿಸಿಬೇಳೆಬಾತ್ ಮಸಾಲೆ ವಡೆ
ಒಬ್ಬಟ್ಟು ತಟ್ಟೇಗ್ ಬಿತ್ತು
ಚುರು ಚುರು ಅಂತಿದ್ದ ಹೊಟ್ಟೇಗೆ
ಸಾಕಾಗೋಷ್ಟು ತಿಂಡಿಗಳೂ ಇತ್ತು!!

ಊಟ ಮಾಡಿ ಎಲೆ ಅಡಿಕೆ ಹಾಕ್ಕೊಂಡು
ತಂಪಾಗಿತ್ತು ಹೊಟ್ಟೆ!!
ಮಲಗೇ ಬಿಡ್ತಿದ್ವಿ ಮಂಚದ ಮೇಲೆ
ಹಾಗೇ ಯಾರಾದ್ರೂ ಬಿಟ್ರೆ!

ಇಷ್ಟು ದೂರ ಬಂದು ಬಿಸಿಲಲ್ಲಾದ್ರೂ
ತಲಕಾಡು ನೋಡದೇ ಇರಕ್ಕೆ ಉಂಟೇ?
ಬಿಸಿಲೇ ಆಗ್ಲಿ ಮಳೆಯೇ ಆಗ್ಲಿ
ನೋಡೇ ಬಿಡೋಣ ಅಂತ ಹೊಂಟ್ವಿ!

ಕಾವೇರಿ ಅಂತೂ ಕೂಲಾಗಿದ್ಲು
ನೋಡೋಕ್ ಎರಡು ಕಣ್ಣು ಸಾಲ್ದು
ಸುತ್ತಾ ಕಾಡು ಮಧ್ಯೆ ನೀರು
ವಾಹ್..ಎಂಥಾ ನೋಟ ಗುರೂ !

ಆಟ ಆಡಕ್ಕೆ ಬಿಡಲ್ಲ ಅಂದ್ರೂ
ಸುಮ್ನಿರ್ತೀವಾ ನಾವು
ತೆಪ್ಪ ಹತ್ತಿ ಹೊರಟೇ ಬಿಟ್ವಿ
ಬೆಪ್ಪಾಗಿದ್ರು ಅವ್ರು!

ಮರ ಹತ್ತಿ ಫೋಟೋ ಕ್ಲಿಕ್ಕಿಸಿ
ಕುಣಿದಾಡಿದ್ವಿ ಸ್ವಲ್ಪ
ಕೆಲವರಂತೂ ನಡೆಯಕ್ಕೆ ಆಗ್ದೆ
ಒದ್ದಾಡ್ತಿದ್ರು ಪಾಪ!

ದಾರಿ ಗೊತ್ತಾಗ್ದೆ ಅಲ್ಲಿ ಇಲ್ಲಿ
ಕಾದು ಕಾದು ಸಾಕಾಯ್ತು!!
ಅಂತೂ ಇಂತೂ ದೇವಸ್ಥಾನಕ್ಕೆ ಹೋಗಿ
ದರ್ಶನ ಚೆನ್ನಾಗಾಯ್ತು!

ಮತ್ತೆ ಗೆಸ್ಟ್ ಹೌಸ್ ಸೇರೋದ್ರಲ್ಲಿ
ಕರಗೋಗಿತ್ತು ತಿಂದದ್ದೆಲ್ಲಾ!
ಕುರುಕಲು ತಿಂಡಿ ನಾ ಮುಂದು ತಾ ಮುಂದು..
ಹಂಚಿಕೊಂಡು ತಿಂದ್ವಿ ಎಲ್ಲಾ!!

ಭಾರವಾದ ಮನಸ್ಸಿಂದ ಬೀಳ್ಕೊಟ್ವಿ
ದೂರ ಹೋಗೋರ್ನೆಲ್ಲಾ..
ಬೆಂಗ್ಳೂರ್ ಕಡೇಗೆ ಕಾರು ತಿರ್ಗುಸ್ಕೊಂಡ್ವಿ
ಮನ್ಸಿಲ್ಲದಿದ್ರೂ ನಾವೆಲ್ಲಾ

ಶಿವಳ್ಳಿ ರೆಸ್ಟೋರೆಂಟ್ ಅಲ್ಲಿ ಊಟ ಮಾಡಿ
ಮತ್ತೆ ಬೈ ಹೇಳಿದ್ವಲ್ಲಾ
ರಾತ್ರಿ ಕತ್ತಲು ಗಾಢವಾಗ್ತಿತ್ತು..
ನಿದ್ರೆ ಆವರಿಸಿತ್ತು ಮೆಲ್ಲ..

ಮಿಸ್ ಮಾಡ್ಕೊಂಡೋರು ನೋವ್ ಮಾಡ್ಕೋಬೇಡಿ!!

-ಪೂವಿಕೃ

Comments

Post a Comment

Popular Posts