ಅಮ್ಮನ ಹುಡುಕಾಟ...

ಅರಸುತ್ತಾ ಹೊರಟೆ ನಾನು..

ಕಳೆದುಹೋದ ಅಮ್ಮನ ಪ್ರತಿರೂಪವನ್ನು

ಕೈಯಿಗೆ ಸಿಗುತ್ತಿದ್ದಂತೆಯೇ ಮಾಯವಾಗುತ್ತಿತ್ತು!!

ಮಾಯಾಮೃಗವೇ ಇರಬೇಕೇನೋ!!


ಕೆಲವರು ತೋರುತ್ತಿದ್ದರು ಕರುಣೆ

ಮತ್ತೆ ಕೆಲವರು ಅನುಕಂಪ!

ಯಾರಲ್ಲೂ ಕಾಣಲಾಗಲಿಲ್ಲ ಅಮ್ಮನ ಪ್ರತಿರೂಪ

ಕಾರಣ ಗೊತ್ತಿಲ್ಲ! ನನ್ನದೇ ತಪ್ಪಾ??


ಅಷ್ಟು ಸುಲಭವಲ್ಲ ಮತ್ತೆ ದಕ್ಕಿಸಿಕೊಳ್ಳುವುದು..

ಆದರೂ ಹುಡುಕುತ್ತಲೇ ಇದ್ದೆ..

ಏನು ಕೊಟ್ಟು ಕೊಳ್ಳಬಹುದೆಂದು

ಯೋಚಿಸುತ್ತಲೇ ಇದ್ದೆ..


ಹುಡುಕಿ ಹುಡುಕಿ ಸುಸ್ತಾಗಿ ಅಳುತ್ತಾ ಮಲಗಿರುವಾಗ 

ಕಣ್ಣೊರೆಸಿದಂತಾಯ್ತು ಎರಡು ಪುಟ್ಟ ಕೈಗಳು 

ದಿಗ್ಗನೆದ್ದು ಕುಳಿತಾಗ ಕಂಡದ್ದು ಆ ಮುಗ್ಧ ಕಂಗಳು!

ಛೇ! ಅರಿವಾಗದೇ ಹೋಯ್ತೇ ಎಂಥಾ ಮರುಳು!!

ಅಮ್ಮನ ಪ್ರತಿರೂಪವಲ್ಲವೇ ಈ ನನ್ನ  ಮಗಳು!!


-ಪೂವಿಕೃ

Comments

Popular Posts