ಚುಟುಕುಗಳು

೧. ನಗು

ನಗು ಬಂದಾಗ ನಕ್ಕುಬಿಡಿ

ಅದಕ್ಕೆ ಬೇಕಿಲ್ಲ ಲೈಸೆನ್ಸ್ !

ಆದರೂ ಇರಬೇಕು

ಸ್ವಲ್ಪ ಕಾಮನ್ ಸೆನ್ಸ್!!


೨. ಜಿಪುಣ

ಅವನು ಖರ್ಚಿನಲ್ಲಿ ಮಹಾ ನಿಪುಣ

ಅದಕ್ಕೇ ಅವನನ್ನು ಕರೆಯುವರು ಜಿಪುಣ!


೩. ಹೆಸರು

ಮೊದಲನೆಯದು ಖಚಿತ

ಎರಡನೆಯದು ಚಕಿತ

ಮೂರನೆಯದು ಉಚಿತ!!


೪. ನನ್ನವಳು

ಮದುವೆಗೆ ಮುಂಚೆ

ನನ್ನವಳಾಗಿದ್ದಳು - ಬಿದಿರು ಬೊಂಬೆ!

ಮದುವೆಯ ನಂತರ

ಆಗಿದ್ದಾಳೆ - ಬೆದರು ಬೊಂಬೆ?!!


ಮದುವೆಗೆ ಮುಂಚೆ

ನನ್ಬವಳಾಗಿದ್ದಳು - ಟ್ರಿಮ್ಮು ಸ್ಲಿಮ್ಮು

ಈಗ ಆಗಿದ್ದಾಳೆ - ದೊಡ್ಡ ಡ್ರಮ್ಮು !!


-ಪೂವಿಕೃ ( ನಗು ಬಂದ್ರೆ ನಕ್ಕು ಬಿಡಿ )


Comments

Popular Posts