ಹೆಣ್ಣಾಗಿ ಹುಟ್ಟಿದ್ದೇ ತಪ್ಪೇ?

ಹೆಣ್ಣಾಗಿ ಹುಟ್ಟಿದ್ದೇ ತಪ್ಪೇ?


ಎಲ್ಲಿ ಹೆಣ್ಣನ್ನು ಪೂಜಿಸುವರೋ ಅಲ್ಲಿ ದೇವತೆಗಳು ನೆಲೆಸುವರು ಎನ್ನುತ್ತಿದ್ದ ದೇಶದಲ್ಲಿ 

ರಾವಣ, ದುಷ್ಯಾಸನ, ಕೀಚಕರಾದಿಯಾಗಿ

ಬರೀ ರಾಕ್ಷಸರದೇ.. ಅಟ್ಟಹಾಸ..

ಹೆಣ್ಣಾಗಿ ಹುಟ್ಟಿದ್ದೇ ತಪ್ಪೇ? 


ಅನಾದಿ ಕಾಲದಿಂದಲೂ ಇರುವುದೀ ಗೋಳು 

ಹೆಣ್ಣು ಬರೀ ಭೋಗ ವಸ್ತುವೇ ಆಗಿಹಳು

ಅಂದು ಅಹಲ್ಯೆ, ಸೀತೆ, ದ್ರೌಪದಿ..

ಇಂದು.. ನಿರ್ಭಯಾ, ಪ್ರಿಯಾಂಕಾ ಇತ್ಯಾದಿ..

ಹೆಣ್ಣಾಗಿ ಹುಟ್ಟಿದ್ದೇ ತಪ್ಪೇ? 


ಹಸುಗೂಸಿನಿಂದ ಹಿಡಿದು ಮುದುಕಿಯವರೆಗೂ..

ಕಾಮಾಂಧರಿಗೆ ಪರಿವೆಯಿಲ್ಲ ಯಾರಾದರೂ.. 

ಕ್ಷಣಿಕ ಸುಖಕ್ಕಾಗಿ ಹೆಣ್ಣ ಬಲಿಕೊಟ್ಟರು

ಇವರಿಗಿಲ್ಲವೇ ಯಾರೂ ಅಕ್ಕ ತಂಗಿಯರು?

ಛೆ.. ಹೆಣ್ಣಾಗಿ ಹುಟ್ಟಿದ್ದೇ ತಪ್ಪೇ? 


ಹೆಣ್ಣೊಂದು ಭೋಗ ವಸ್ತುವಲ್ಲ..

ಹೆಣ್ಣಿಗೂ ಒಂದು ಮನಸಿದೆ..

ಹೆಣ್ಣಿಗೂ ಒಂದು ಕನಸಿದೆ..

ಹೆಣ್ಣಿಗೂ ಬದುಕಲು ಸ್ವಾತಂತ್ರ್ಯವಿದೆ(?)


ಓ ಹೆಣ್ಣೇ.. ನೀ ಎಚ್ಚೆತ್ತು ಆದಿಶಕ್ತಿಯಾಗು!

ನೀ ಸೀತೆಯಾಗದೇ ಚಾಮುಂಡಿಯಾಗು

ಗೌರಮ್ಮನಾಗದೆ ಮಾರಮ್ಮನಾಗು!

ದುಷ್ಟರ ಕೊಂದು ನೀ ದುರ್ಗೆಯಾಗು!!


ಹೆಣ್ಣನ್ನು ದೇವತೆಯೆಂದು ಪೂಜಿಸದಿದ್ದರೂ ಪರವಾಗಿಲ್ಲ.. ಅವಳನ್ನು ಭಕ್ಷಿಸಬೇಡಿ!

ಹೆಣ್ಣಾಗಿ ಹುಟ್ಟಿದ್ದು ಖಂಡಿತ ಅವಳ ತಪ್ಪಲ್ಲ..

ಹೆಣ್ಣನ್ನು ರಕ್ಷಿಸಿ!! ಹೆಣ್ಣನ್ನು ಗೌರವಿಸಿ!!


-ಪೂವಿಕೃ ( ನಾನೂ ಒಂದು ಹೆಣ್ಣೇ)

Comments

Popular Posts