ಕಾಯಕವೇ ಕೈಲಾಸ

ಎಂಥ ಚಂದ ಕವನ ಬರದಾರವ್ವ ಬಲು ಮಸ್ತ್ ಐತಿ..

ನನ್ನ ಪೋಟೋ ನಿಜಕ್ಕೂ ಬಲು ಛಂದ ಐತಿ

ಹಗ್ಗ ಹೊಸಿಯೋದು ನನ್ನ ಕುಲ ಕಸಬು ಆಗೈತ್ರಿ..

ಈ ಮನಿ ನನ್ನ ಮಗ ಕಟ್ಟಿಸಿದ್ದಾ ಖರೆ ಐತ್ರಿ


ನಾ ಏನೂ ಅಟೊಂದು ಓದಿಲ್ಲವ್ವ

ನನ್ನ ಮಗ ಮಾತ್ರ ದೊಡ್ಡ ಆಪೀಸರವ್ವ

ನನ್ನ ಕಸುಬು ಅವಂಗೆ ಏಳ್ಕೊಟ್ಟಿಲ್ಲವ್ವ..

ನನ್ನ ತಲಿಗೇ ಇದು ಕೊನೆಯಾಯ್ತದೇನೋನವ್ವ..


ಈ ವಯಸ್ನಾಗೆ ಸುಮ್ನೆ ಕೂರಕ್ಕೆ ಆಗಲ್ಲವ್ವ

ದುಡಿದ್ ತಿನ್ನೋದ್ರಲ್ಲಿ ತ್ಯಪ್ಪೇನೈತ್ರವ್ವ?

ಮನಷ್ನಾಗಿ ಉಟ್ಟಿದ್ ಮ್ಯಾಲೆ ಸುಮ್ಕೆ ಕೂರಬಾರ್ದವ್ವ

ರಟ್ಟೆಯಾಗ್ ಸಕ್ತಿ ಇರೋವರ್ಗೂ ದುಡೀಬೇಕ್ರವ್ವ…


ನನ್ನ ಪೋಟೋಗೆ ಈ ತರ ಎಲ್ಲಾ ಬರೀತಾರಂತ ಗೊತ್ತಿರ್ಲಿಲ್ಲವ್ವ

ನನ್ನ ಕೆಲ್ಸ ನಂಗೆ ಮಾಡಕ್ಕೆ ಬಿಡ್ರವ್ವ..

ನಿಮ್ಗೂ ಕೆಲ್ಸ ಇದ್ರೆ ಮಾಡೋಗ್ರವ್ವ…

ಕಾಯಕವೇ ಕೈಲಾಸ ಅನ್ನೋದು ಗೊತ್ತಿಲ್ವೇನ್ರವ್ವ??


-ಪೂವಿಕೃ (ಗ್ರಾಮೀಣ ಭಾಷೆಯಲ್ಲಿ ಬರೀತಿರೋದು ಇದೇ ಮೊದಲು. ಏನಾದ್ರೂ ತಪ್ಪಿದ್ರೆ ಒಸಿ ಒಟ್ಟೆಗಾಕ್ಕೊಳ್ಳಿ)



Comments

Popular Posts