ಕೊರೋನಾ ಕೊರೋನಾ

ಕೊರೋನಾ ಕೊರೋನಾ

ಎಲ್ಲಿ ನೋಡಿದ್ರೂ ನಿಂದೇ ಹವಾನಾ?

ಬರಬೇಡಾ ನೀ ದಾಟಿ ಗಡೀನಾ

ತರಬೇಡ ನಮ್ಗೆ ಶೀತದ ಜ್ವರಾನಾ


ನಿನ್ನ ಹಾವಳಿಯಿಂದಾಯ್ತು ಎಷ್ಟೊಂದ್ ಅದ್ವಾನ..

ಬಂಗಾರದ ಬೆಲೆ ಅಂತೂ ಏರಿತು ಗಗನಾ..

ಟಿ.ವಿ. ಚಾನೆಲ್ ಗಳಿಗೆ ಸುಗ್ಗೀನೋ ಸುಗ್ಗೀನಾ?

ಮಾಸ್ಕ್ ಗಳಿಗೆ ಅಂತೂ ಭಾರೀ ಬೇಡಿಕೇನಾ?


ಎಲ್ಲಿ ಓಡಾಡಕ್ಕೂ ತುಂಬಾ ಭಯಾನಾ..

ಓಡಾಡಿ ಬಂದ್ಮೇಲೆ ಕೈ ತೊಳ್ಕೋಬೇಕಂತೆ ನಿಜಾನಾ?

ಮಕ್ಕಳಿಗೀಗ ಪರೀಕ್ಷೆ ಸಮಾಯಾನಾ..

ನೀ ಖಂಡಿತ ತರ್ಬೇಡ ಅವರಿಗೆ ರೋಗಾನಾ..


ಕೊರೋನಾ ಕೊರೋನಾ

ನೀ ಎಷ್ಟೇ ಆದ್ರೂ ಮೇಡ್ ಇನ್ ಚೈನಾ..

ನಾವೆಲ್ಲಾ ಮಾಡಿದ್ದೀವಿ ನಿನ್ನ ಯಾವತ್ತೋ ಬ್ಯಾನಾ..

ಆದ್ರೂ ಧೈರ್ಯ ಇದ್ರೆ ಬಾ ನೋಡೋಣ..

ನೀ ಬಂದ್ರೂ ನಮ್ಮಲ್ಲಿದೆ ಆಯುರ್ವೇದದ ರಾಮಬಾಣಾ..


ನಿನ್ನ ಕೊಲ್ಲೋಕೆ ನಾವಂತೂ ರೆಡೀನಾ.. 

ನಮ್ಮ ಮೇಲೆ ಆಕ್ರಮಣ ಮಾಡಿದ್ರೆ ಸುಮ್ನೆ ಬಿಡ್ತೀನಾ??

ಆದ್ರೂ ನೀ ಬರದಿದ್ರೆ ನಾವು ಕ್ಷೇಮಾನಾ..

ಬರದೇ ಇದ್ರೆ ಖಂಡಿತ ದೇವರಿಗೆ ಕೈ ಮುಗೀತೀನಾ..


-ಪೂವಿಕೃ

Comments

Popular Posts