ನಾವ್ ಅಡುಗೆ ಮಾಡೋದಿಲ್ಲ..

(ನಾವ್ ಮನೇಗ್ ಹೋಗೋದಿಲ್ಲ ದಾಟಿಯಲ್ಲಿ)

ನಾವ್ ಅಡುಗೆ ಮಾಡೋದಿಲ್ಲ..


ಅಡುಗೆ ಮಾಡಿಲ್ಲ ಅಂತ ಬೈಬೇಡಿ ನೀವು

ವಾಟ್ಸಪ್ಪ್ಪಲ್ಲಿ ಚಾಟ್ ನಡೆಸಿದ್ದೀವಿ ನಾವು


ವೀಕೆಂಡ್ ಅಡುಗೆ ಮನೇಗೆ ಕಾಲಿಡಲ್ಲ ಅಂತ

ಅವತ್ತೇ ನಿಮಗೆ ಹೇಳಿಲ್ವ ರಾಜಾ

ಅವತ್ತೇ ನಿಮಗೆ ಹೇಳಿಲ್ವ

ಮಾಡ್ಲಿಲ್ಲ ಅಂತ ಅಂದ್ರು ಯಾಕಂತ ಕೇಳ್ತೀರಲ್ಲ

ನೀವೇನೆ ಮಾಡಕ್ಕೆ ಆಗಲ್ವ..

ಹೋಗ್ಲೀ ಹೋಟ್ಲಿಂದ ತರಕ್ಕೆ ಆಗಲ್ವ


ನಾವ್ ಅಡುಗೆ ಮಾಡೋದಿಲ್ಲ..

ನಾವ್ ಅಡುಗೆ ಮಾಡೋದಿಲ್ಲ..

ನಮಗೆ ಸಪೋರ್ಟು ಮಾಡೋರಿಲ್ಲ..

ಇಲ್ಲ ಇಲ್ಲ ಇಲ್ಲ..ಇಲ್ಲಾ

ನಾವ್ ಅಡುಗೆ ಮಾಡೋದಿಲ್ಲ..


ವಾರ ಪೂರ್ತಿ ಮಾಡಿ 

ಒಂದಿನ ಸುಮ್ನೆ ಕೂತು 

ರೆಸ್ಟು ತಗೊಂಡ್ರೆ..

ತಪ್ಪೇನಿದೆ.. ತಪ್ಪೇನಿದೆ

ಒಮ್ಮೊಮ್ಮೆ ಇಂಟೆರೆಸ್ಟ್ ಇರುತ್ತೆ.. ಒಮ್ಮೊಮ್ಮೆ ಬೋರಾಗುತ್ತೆ.. 

ಹೊಸಾದು ಕಲಿಯೋಕಿಲ್ಲಿ

ಮತ್ತೇನಿದೆ.. ಮತ್ತೇನಿದೆ??


ಹೋಟೆಲ್ ತಿಂಡಿ ಒಳ್ಳೇದಲ್ಲ

ಆದ್ರೂ ಅದನ್ನೇ ತಿಂತೀವಲ್ಲ

ಅಡುಗೆ ಮಾಡಕ್ಕೆ ಬರೋದಿಲ್ಲ

ಮಾಡದೆ ಇದ್ರೆ ವಿಧಿ ಇಲ್ಲ..


ಮಾಡಲಿಲ್ಲ ಅಂತಾ ಅಂದ್ರೆ 

ತೌರಿಗೆ ಹೋಗ್ ಅಂತೀರಲ್ಲ....

ಈ ಮನೇನೂ ನಂದೇ ಅಲ್ವಾ.. ಯಾಕೆ

ನಿಮ್ಮ ಮಕ್ಕಳಿಗೆ ತಾಯಿ ನಾನಲ್ವ.. 


|ನಾವ್ ಅಡುಗೆ ಮಾಡೋದಿಲ್ಲ..|


ನಾವು ಉಪ್ಪಿಟ್ಟು ಮಾಡಿದ್ರೆ

ಉಪ್ಪಿಟ್ಟು ಯಾಕೆ ಮಾಡ್ದೆ ಅಂತೀರ

ಚೂರು ತಿಳಿಸಾರು ಮಾಡಿದ್ರೆ

ತಿಳಿಸಾರು ಯಾಕೆ ಮಾಡ್ದೆ ಅಂತೀರ.. 

ಸ್ವಲ್ಪ ಬಿಸಿಬೇಳೆ ಬಾತ್ ಮಾಡಿದ್ರೆ..

ಏನಿವತ್ತು ಬಿಸಿಬೇಳೆ ಬಾತ್ 

ಮಾಡ್ದೆ ಅಂತೀರಾ..


ನಾವು ಮಾಡ್ಬೇಕೋ ಬೇಡ್ವೋ

ತೋಚಿದ್ ಮಾಡ್ಬೇಕೋ ಬೇಡ್ವೋ

ಈ ಪ್ರಶ್ನೆ ಯಾರಿಗ್ ಕೇಳೋಣ..


ಇದ್ಕೆ ಮೀಟಿಂಗ್ ಆಗ್ಬೇಕು

ಇದ್ಕೆ ಮೀಟಿಂಗ್ ಆಗ್ಬೇಕು

One hour extra chat ಮಾಡೋಣ


ಆಗಲ್ಲಪ್ಪ ನಮ್ಮ ಕೈಲಿ

ಅಡುಗೆ ಮಾಡಕ್ಕೆ ಡೈಲಿ


ಆಫೀಸು ಯಾಕೆ ಬೇಕು

ಅಂತೀರಲ್ಲಾ ನಮಗೆ

ನಾವೇನು ದುಡಿಯೋದು ಬೇಕಿಲ್ವಾ

ಯಾಕೆ ಖರ್ಚೆಲ್ಲಾ ಶೇರು ಮಾಡಲ್ವಾ

|ನಾವ್ ಅಡುಗೆ ಮಾಡೋದಿಲ್ಲ..|

ಇಲ್ಲಾ….

-ಪೂವಿಕೃ 

Comments

Popular Posts