ನೂರೆಂಟು ಕವನ!!

ನೂರೆಂಟು ಕವನ!!


ನಾ ಬರೆದಿರುವೆ ಕವನ ನೂರೆಂಟು!

ಇದಕ್ಕುಂಟು ಹಲವು ವರ್ಷಗಳ ನಂಟು!

ನೆನಸಿಕೊಂಡಾಗ ಬಹಳ ಖುಷಿಯುಂಟು

ನಾನೇ ಬರೆದೆನೇ ಎಂಬ ಅಚ್ಚರಿಯೂ ಉಂಟು !!


ನಾ ಶುರು ಮಾಡಿದ್ದು ಚುಟುಕು ಕವನ

ನಂತರ ಮೂಡಿಬಂದಿದ್ದು ವ್ಯಕ್ತಿ ಚಿತ್ರಣ

ಆಗಾಗ ಬರೆಯುತ್ತಿದ್ದೆ ವೈಯಕ್ತಿಕ ಕಥನ..

ಕಿರಿಯರಿಗೆ ನೀಡುತ್ತಿದ್ದೆ ಗಮ್ಮತ್ತಿನ ಭಾಷಣ!!


ಶ್ರದ್ಧಾಂಜಲಿ ಕವನಗಳಿಗೆ ಕಣ್ಣೀರಿನ ಸಿಂಚನ

ತುಂತುರ ಕವನಗಳಿಗೆ ಮೆಚ್ಚುಗೆಯ ಸಮ್ಮಾನ!

ಎಲ್ಲವನ್ನು ನೆನೆಸಿಕೊಂಡರೆ ಒಂಥರಾ ರೋಮಾಂಚನ!

ಕವಿಯಿತ್ರಿ ಎಂಬ ಬಿರುದೇ ತಾವು ನೀಡಿದ 

ಸನ್ಮಾನ !!


ಮುಂದುವರೆಸುವೆನು ನನ್ನೀ ಕಾವ್ಯಮಯ ಪಯಣ

ನಿಮ್ಮ ಆಶೀರ್ವಾದದಿಂದ ಪ್ರಕಟಿಸುವೆ ಕವನ ಸಂಕಲನ !

ಹೀಗೇ ತುಂಬಿರಲಿ ನಿಮ್ಮ ಪ್ರೀತಿ ಅಭಿಮಾನ

ನನ್ನ ಕವನ ಮೆಚ್ಚಿದೆ ನಿಮಗೆಲ್ಲಾ ನನ್ನ ನಮನ!!


-ಪೂವಿಕೃ (108 poems, can't believe!)

Comments

Popular Posts