ಅಮ್ಮನ ಗೆಲುವು!!

ಅಮ್ಮನ ಗೆಲುವು!!


ಬಹಳ ನೋವು ಬಳಲಿಕೆಯ ನಂತರ ತನ್ನ ಗರ್ಭದಿಂದ ಹೊರಬಂದ ಮಗು ಜೋರಾಗಿ ಅತ್ತಾಗ.. ತಾನು ತಾಯಿಯಾದ ಸಂತಸದಲ್ಲಿ ತೇಲಿದಾಗ..ಅದು ಅಮ್ಮನ ಮೊದಲ ಗೆಲುವು!


ಮಗು ತನ್ನಷ್ಟಕ್ಕೇ ಬೋರಲು ಬಿದ್ದಾಗ

ಅಂಬೆಗಾಲಿಟ್ಟು ಮುನ್ನಡೆದಾಗ

ಗೋಡೆ ಹಿಡಿದು ಎದ್ದು ನಿಂತಾಗ..

ಅಮ್ಮಾ ಎಂದು ಮೊದಲ ಬಾರಿ ಕೂಗಿದಾಗ

ಪ್ರತಿ ಕ್ಷಣವೂ ಅದು ಅಮ್ಮನ ಗೆಲುವು !!


ಅಮ್ಮಾ ಹಸಿವು ಎಂದಾಗ ಮಗುವಿನ ಹೊಟ್ಟೆ ತುಂಬಿಸಿ.. ಮಗುವಿನ ಬೇಕು ಬೇಡಗಳಿಗೆ ಸ್ಪಂದಿಸುತ್ತಾ ಅದನ್ನು ತಿದ್ದುತ್ತಾ

ಅದು ಸರಿಯಾದ ದಾರಿಯಲ್ಲಿ ನಡೆಯುವುದನ್ನು ಕಲಿಸಿದಾಗ 

ಅದರ ಬೆಳವಣಿಗೆಯಲ್ಲೇ ಅಮ್ಮನ ಗೆಲುವು!


ಮಗು ತಾನು ಕಲಿತದ್ದನ್ನು ಅಮ್ಮನ ಮುಂದೆ ಹೇಳಿದಾಗ

ತನ್ನ ಪ್ರತಿಭೆಯಿಂದ ಪ್ರಶಸ್ತಿ ಪುರಸ್ಕಾರಗಳನ್ನು ಗಳಿಸಿದಾಗ

ತನ್ನೆಲ್ಲ ಏಳಿಗೆಗೆ ಅಮ್ಮನೇ ಕಾರಣ ಎಂದಾಗ

ಇದಕ್ಕಿಂತ ಬೇರೆ ಗೆಲುವು ಬೇಕೇ??


ಮಗಳ ಮದುವೆ ಮಾಡಿದ ಕೂಡಲೇ ಕಳೆಯಲಿಲ್ಲ ಅಮ್ಮನ ಜವಾಬ್ದಾರಿ

ಅವಳ ಬಸಿರು ಬಾಣಂತನಗಳೂ ಹೆಗಲೇರಿ

ಎಲ್ಲವನ್ನೂ ನಿಭಾಯಿಸಿ ನಿಟ್ಟುಸಿರು ಬಿಟ್ಟಾಗಲೇ ಅಮ್ಮನ ಮತ್ತೊಂದು ಗೆಲುವು!


ಮಕ್ಕಳು ಸುಖವಾಗಿ ಸಂಸಾರ ಮಾಡಿ

ಮೊಮ್ಮಕ್ಕಳನ್ನೂ ತನ್ನ ಮಕ್ಕಳಂತೆಯೇ ಲಾಲಿಸಿ ಪಾಲಿಸಿ..  ಅವರ ಬೆಳವಣಿಗೆಯಲ್ಲೂ ತನ್ನ ಕೊಡುಗೆ ನೀಡಿ..

ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಾ ಸಾಗುವ..

ಪ್ರತಿ ಹಂತದಲ್ಲೂ ಅಮ್ಮನದೇ ಗೆಲುವು!!


ಅಮ್ಮನ ಗೆಲುವುಗಳಿಗೆ ಮಿತಿಯಿಲ್ಲ..

ಅಮ್ಮನ ಗೆಲುವುಗಳಿಗೆ ಕೊನೆಯಿಲ್ಲ!!


ಪೂವಿಕೃ

Comments

Popular Posts