ನನ್ನ ಕರ್ತವ್ಯ

ನನ್ನ ಕರ್ತವ್ಯ

My Responsibility


ಹೇಳುವುದಷ್ಟೇ ನನ್ನ ಕರ್ತವ್ಯ

ಅದನ್ನು ಅರ್ಥೈಸಿಕೊಳ್ಳುವುದು ನಿನಗೆ ಬಿಟ್ಟದ್ದು..

I am here to say

I don't care how you understand


ಕೊಡುವುದಷ್ಟೇ ನನ್ನ ಕರ್ತವ್ಯ

ಅದನ್ನು ಕಾಪಾಡಿಕೊಳ್ಳುವುದು ನಿನಗೆ ಸೇರಿದ್ದು..

I am here to give

I don't care how you save it


ಮಾಡಿಡುವುದಷ್ಟೇ ನನ್ನ ಕರ್ತವ್ಯ

ಅದನ್ನು ತಿನ್ನುವುದೋ ಬಿಡುವುದೋ ನಿನ್ನಿಷ್ಟ.. 

I am here to cook

I don't bother whether you eat or not


ಪ್ರೀತಿಸುವುದು ನನ್ನ ಕರ್ತವ್ಯ

ಅದನ್ನು ನಂಬುವುದು ನಿನಗೆ ಬಿಟ್ಟಿದ್ದು

I am here to love

It's your choice to believe or not


ನಡೆಯುವುದು ನನ್ನ ಕರ್ತವ್ಯ

ನನ್ನ ಹಿಂಬಾಲಿಸುವುದು ನಿನ್ನಿಷ್ಟ..

I am here to walk

I don't insist that you follow me


ಜೀವಿಸುವುದು ನನ್ನ ಕರ್ತವ್ಯ

ನನ್ನೊಟ್ಟಿಗೆ ಜೀವಿಸುವುದು ನಿನ್ನಿಷ್ಟ

I am here to live

It's your choice to live with me


ಬರೆವಣಿಗೆ ನನ್ನ ಕರ್ತವ್ಯ..

ಅದನ್ನು ಮೆಚ್ಚುವೆಯೋ ತಿರಸ್ಕರಿಸುವೆಯೋ ನಿನ್ನಿಚ್ಛೆ..

I am here to write

I don't care whether you like it or not


-ಪೂವಿಕೃ (PuViKru)

Comments

Popular Posts