ತುಂತುರು ಕವನ-೩

ಕಾಲ ಮತ್ತೆ ಮರಳಿ ಬರುವುದೆ?


ಜೀವನದಲ್ಲಿ ಸೊಗಸಿದೆ.. 

ಪ್ರಕೃತಿಯ ಸೊಬಗಿದೆ

ಸಂಗೀತದ ಹೊನಲಿದೆ

ಸಾಹಿತ್ಯದ ಘಮಲಿದೆ


ಪ್ರೀತಿಯ ಅಮಲಿದೆ

ಸೌಂದರ್ಯದ ಖನಿಯಿದೆ

ಹರಯದ ಹುಮ್ಮಸ್ಸಿದೆ

ಆಟವಾಡಲು ಮನಸ್ಸಿದೆ


ಸವಿಯಲು ಸ್ವಾದವಿದೆ

ಮತ್ತಿನ ಉನ್ಮಾದವಿದೆ

ನೋಟದಲ್ಲಿ ರಸಿಕತೆಯಿದೆ

ಮಾತಿನಲ್ಲಿ ಸರಸವಿದೆ


ಎಲ್ಲವೂ ಸನಿಹವಿದೆ

ಎಲ್ಲವೂ ಹಿತವಿದೆ

ಆದರೂ ಅನುಭವಿಸದೆ

ನೀನೇಕೆ ಹಿಂದುಳಿದೆ?


ಪುನಃ ಬೇಕೆಂದರೆ

ಕಾಲ ಮತ್ತೆ ಮರಳಿ ಬರುವುದೆ?

ಪುನಃ ಬೇಕೆಂದರೆ

ಕಾಲ ಮತ್ತೆ ಮರಳಿ ಬರುವುದೆ?


-ಪೂವಿಕೃ

Comments

Popular Posts