ನಿಮಗಾಗಿ ಒಂದು ಘಳಿಗೆ ಮೀಸಲಿಡಿ!

ಬೆಳಗೆದ್ದು ಅಡುಗೆ ಮನೆಗೋಡಿ

ಗಡಿಬಿಡಿಯಲ್ಲಿ ತಿಂಡಿ ಮಾಡಿ

ಗಂಡ ಮಕ್ಕಳನು ಆಫೀಸು ಶಾಲೆಗೆ ಓಡಿಸಿ

ಕಾಫಿ ಕುಡಿಯಲಾದರೂ ಒಂದು ನಿಮಿಷ ಕೂಡಿ

ನಿಮಗಾಗಿ ಒಂದು ಘಳಿಗೆ ಮೀಸಲಿಡಿ!


ಅಡುಗೆ ಮಾಡಿ ಎಲ್ಲರಿಗೂ ಬಡಿಸಿ

ಮಿಕ್ಕಿದ್ದು ಉಂಡು ಅಡುಗೆ ಮನೆ ಸ್ವಚ್ಛಪಡಿಸಿ

ಮಲಗುವ ಮುನ್ನ ಒಮ್ಮೆ ಏಕಾಂತದಿ ಕುಳಿತು

ಮೆಚ್ಚಿನ ಹಾಡು ಆಲಿಸುತ್ತಾ ಮೈಮರೆತು ಹಾಡಿ...

ನಿಮಗಾಗಿ ಒಂದು ಘಳಿಗೆ ಮೀಸಲಿಡಿ!


ವಾರಾಂತ್ಯದಲಿ ವಿಶೇಷ ಅಡುಗೆ ಮಾಡಿ

ಮನೆಗೆ ಬಂದು ಹೋಗುವವರ ಸುಧಾರಿಸಿ

ಎಲ್ಲರನೂ ಬೀಳ್ಕೊಟ್ಟು ಟಿ.ವಿ ಮುಂದೆ ಕೂತು

ನಿಮ್ಮ ಮೆಚ್ಚಿನ ಕಾರ್ಯಕ್ರಮ ನೋಡಿ..

ನಿಮಗಾಗಿ ಒಂದು ಘಳಿಗೆ ಮೀಸಲಿಡಿ!


ಹಬ್ಬಹರಿದಿನಗಳಲ್ಲಿ ದೇವರ ಪೂಜಿಸಿ

ಎಲ್ಲರನೂ ಕರೆದು ಸಂಭ್ರಮಿಸಿ

ಮಕ್ಕಳಿಗೆ ಅಲಂಕಾರ ಮಾಡಿ ಮುದ್ದಿಸಿ

ನೀವೂ ಸಿಂಗರಿಸಿಕೊಂಡು ಸಂತಸಪಡಿ..

ನಿಮಗಾಗಿ ಒಂದು ಘಳಿಗೆ ಮೀಸಲಿಡಿ!


ದಿನನಿತ್ಯದ ಬದುಕಿನ ಜಂಜಾಟದಲ್ಲಿ

ಎಲ್ಲರಿಗೂ ಸೇವೆ ಮಾಡುವ ಉತ್ಸಾಹದಲ್ಲಿ

ನಿಮ್ಮ ಸ್ವಂತಿಕೆಯನ್ನು ಮರೆಯದಿರಿ

ನಿಮ್ಮ ಹವ್ಯಾಸಗಳಿಗೂ ಗಮನ ಕೊಡಿ

ಹೌದು!! ನಿಮಗಾಗಿ ಒಂದಷ್ಟು ಘಳಿಗೆ ಮೀಸಲಿಡಿ!!!


-ಪೂವಿಕೃ ( ಎಲ್ಲಾ ಗೃಹಿಣಿಯರಿಗೂ ಈ ಕವನವನ್ನು ಸಮರ್ಪಿಸುತ್ತಿದ್ದೇನೆ..ಇದನ್ನು ಓದಲು ಒಂದು ಘಳಿಗೆ ಮೀಸಲಿಡಿ!)

Comments

Popular Posts