ಚಿರಕಾಲವಿರಲಿ ನಮ್ಮ ಅನುಬಂಧ
ನೀ ಹುಟ್ಟಿದ ಕೋಣೆಯಲ್ಲೇ ನಾನು ಹುಟ್ಟಿದೆ..
ನೀ ಮಲಗಿದ ತೊಟ್ಟಿಲಲ್ಲಿ ನಾನು ಮಲಗಿದೆ..
ಅಜ್ಜಿ ತಾತರ ಮಡಿಲಿನಲ್ಲಿ ಆಡಿ ನಲಿದೆವು..
ಒಂದೇ ಒಡಲ ಕುಡಿಗಳಂತೆ ನಾವು ಬೆಳೆದೆವು..
ಆರೋಗ್ಯಕರವಾಗಿತ್ತು ನಮ್ಮ ಅಂದಿನ ಸ್ಪರ್ಧೆ..
ಪಾಠ ಕಲಿಯುವಲ್ಲಿ ನಮಗಿತ್ತು ತುಂಬಾ ಶ್ರದ್ಧೆ..
ಹಾಡು ನೃತ್ಯ ಯಾವುದರಲ್ಲೂ ಬೀಳಲಿಲ್ಲ ಹಿಂದೆ..
ಆಟ ಓಟಗಳಲ್ಲು ನಾವು ಸದಾ ಇದ್ದೆವು ಮುಂದೆ..
ಹಂಚಿಕೊಂಡೆವು ನೋವು ನಲಿವು ಪ್ರತಿ ಹಂತದಲ್ಲೂ..
ನಮ್ಮ ಪಿಸುಮಾತುಗಳಿಗೆ ಸಾಕ್ಷಿಯಾಯಿತು ಮಂಡಿಕಲ್ಲು..
ಖಾನೆ ಬೆಟ್ಟ ತೋಟಗಳ ಸುತ್ತಿ ಸುಳಿದೆವು..
ಬೆಳದಿಂಗಳ ರಾತ್ರಿಯಲಿ ಕೈತುತ್ತ ತಿಂದೆವು.
ಹಬ್ಬಗಳ ಸಂಭ್ರಮದಲ್ಲಿ ಹರುಷ ಪಟ್ಟೆವು..
ಸಭೆ ಸಮಾರಂಭಗಳಲಿ ಜೊತೆಯಾಗಿ ಮೆರೆದೆವು..
ನಮ್ಮ ಸ್ನೇಹ ಪ್ರೀತಿಗಳಿಗೆ ಇರಲಿಲ್ಲ ಕುಂದು..
ನಮ್ಮ ಆತ್ಮ ವಿಶ್ವಾಸ ಕುಗ್ಗಲಿಲ್ಲ ಎಂದೂ.
ಹೀಗೇ ಇರಲಿ ನಮ್ಮ ಸ್ನೇಹ ನೂರು ಕಾಲವೆಂದು..
ಬೇಡುವೆನು ದೇವರಲಿ ಕರವ ಮುಗಿದು ನಿಂದು..
ಜನುಮ ಜನುಮದಲ್ಲು ಇರಲಿ ನಮ್ಮ ಸ್ನೇಹ ಬಿಂದು..
ಚಿರಕಾಲವಿರಲಿ ನಮ್ಮ ಅನುಬಂಧವೆಂದೂ.. 😊
ಮಂಗಳ ನಮ್ಮ ಹಳೆಯ ನೆನಪುಗಳನ್ನು ಹೆಕ್ಕಿ ತೆಗೆದು ಈ ಕವನವನ್ನು ರಚಿಸಿದ್ದೇನೆ.. ಪೂವಿಕೃ 😊
Comments
Post a Comment