ಮತ್ತೆ ಮಗುವಾದಳೇ ಅಮ್ಮ??

ತೊದಲು ಮಾತುಗಳು ತಪ್ಪುತಪ್ಪು ನಡಿಗೆ..
ತಿನ್ನುವಾಗ ಮೆತ್ತಿಕೊಂಡ ಅಗಳು ಮೂತಿಗೆ..
ಮಲಗಿ ಎದ್ದಾಗ ಒದ್ದೆಯಾದ ಹಾಸಿಗೆ..
ಪರಿವೆಯಿಲ್ಲದ ಉಡುಗೆ ತೊಡುಗೆ..
ಮತ್ತೆ ಮಗುವಾದಳೇ ಅಮ್ಮ??

ಮಾತಿಲಿ ಮೊದಲಿನ ಖದರಿಲ್ಲ
ನೋಟದಲಿ ಅಂದಿನ ಕಾಂತಿಯಿಲ್ಲ
ನಡೆಯಲು ಕಾಲಲ್ಲಿ ಶಕ್ತಿಯಿಲ್ಲ
ಗದರಿದರೆ ಪೆಚ್ಚಗೆ ನಗುವಳಲ್ಲ
ಮತ್ತೆ ಮಗುವಾದಳೇ ಅಮ್ಮ??

ಅರಚಿದರೂ ಕಿವಿ ಕೇಳಿಸುವುದಿಲ್ಲ
ಬೇಕುಬೇಡಗಳ ಪರಿವೆಯಿಲ್ಲ
ತನಗೇ ನೋವುಗಳು ನೂರಿದ್ದರೂ
ಊಟವಾಯಿತೇ ಕಂದಾ ಎಂದು ಕೇಳುವಳಲ್ಲ!!
ಮತ್ತೆ ಮಗುವಾದಳೇ ಅಮ್ಮ??

ಅವಳಿಗದ್ದಷ್ಟು ತಾಳ್ಮೆ ನಮಗಿಲ್ಲ
ಅವಳಿಗಿದ್ದಷ್ಟು ಶಕ್ತಿ ನಮಗಿಲ್ಲ..
ಅವಳ ಪ್ರೀತಿಗೆ ಎಣೆಯಿಲ್ಲ
ಅವಳ ತ್ಯಾಗಕ್ಕೆ ಸಮನಿಲ್ಲ..

ಅವಳ ನೋವುಗಳು ದೂರಾಗಲಿ
ಅವಳ ಮನ ನೆಮ್ಮದಿಯ ತಾಣವಾಗಲಿ
ಅವಳ ಆಯಸ್ಸು ಆರೋಗ್ಯ ವೃದ್ಧಿಯಾಗಲಿ
ಆ ದೇವರು ಸದಾ ಕಾಪಾಡಲಿ!

ವಯಸ್ಸಾದ ಎಲ್ಲಾ ತಾಯಂದಿರಿಗೆ

-ಪೂವಿಕೃ

Comments

Popular Posts