ಓ ಅಕ್ಕ ನೀ ನನ್ನ ಗೆಳತಿಯಾದೆ..

ನನ್ನ ಬಾಲ್ಯಕ್ಕೆ ನೀ ಜೊತೆಯಾದೆ..
ನನ್ನ ಕಲಿಕೆಗೆ ನೀ ಗುರುವಾದೆ..
ನನ್ನ ಆರೈಕೆಗೆ ನೀ ಅಮ್ಮನಾದೆ..
ನನ್ನ ಪ್ರೀತಿಗೆ ನೀ ಅಕ್ಕನಾದೆ..

ನಾ ತೊದಲಿದಾಗ ನೀ ಸವಿನುಡಿದೆ..
ನಾ ಎಡವಿದಾಗ ನೀ ಮೇಲೆತ್ತಿದೆ..
ನಾ ಬಳಲಿದಾಗ ನೀ ಆಸರೆಯಾದೆ..
ನಾ ಮುನ್ನಡೆದಾಗ ನೀ ಬೆನ್ನು ತಟ್ಟಿದೆ..

ನನ್ನ ನೋವಿಗೆ ನೀ ಮರುಗಿದೆ..
ನನ್ನ ನಲಿವಿಗೆ ನೀ ಸ್ಪಂದಿಸಿದೆ..
ನನ್ನ ದುಃಖಕ್ಕೆ ನೀ ಹೆಗಲಾದೆ..
ನನ್ನ ಸುಖಕ್ಕೆ ನೀ ನೆರವಾದೆ..

ನನ್ನ ಆಸೆಗಳಿಗೆ ನೀ ನೀರೆರೆದೆ
ನನ್ನ ಅಭಿರುಚಿಗೆ ನೀ ಸ್ಫೂರ್ತಿಯಾದೆ..
ನನ್ನ ಹೊಸಬಾಳಿಗೆ ನೀ ನಾಂದಿಯಾದೆ..
ನನ್ನೆಲ್ಲ ಕನಸುಗಳಿಗೆ ನೀ ಬೆಂಬಲವಾದೆ..

ಓ ಅಕ್ಕ ನೀ ನನ್ನ ಗೆಳತಿಯಾದೆ..
ನನ್ನ ಬದುಕಿಗೆ ನೀ ಮಾರ್ಗದರ್ಶಿಯಾದೆ..
ನನ್ನ ಯೋಜನೆಗಳಿಗೆ ನೀ ಜೊತೆಯಾದೆ..
ನಾನೆಂದೆಂದಿಗೂ ನಿನ್ನ ಋಣಿಯಾದೆ..

ಜನ್ಮ ದಿನದ ಶುಭಾಷಯಗಳೊಂದಿಗೆ
ನಿನ್ನ ಪ್ರೀತಿಯ ತಂಗಿ
ಪೂರ್ಣಿಮಾ (ಪೂವಿಕೃ)






Comments

Popular Posts