ಆಧುನಿಕ ಯುಗ
ಅಪರಿಚಿತರನ್ನು ಪರಿಚಯಿಸಿಕೊಂಡು ಮಾತಾಡುತ್ತೇವೆ..
ಆದರೆ ಪರಿಚಿತರನ್ನು ಅಪರಿಚಿತರಂತೆ ಕಾಣುತ್ತೇವೆ..
ಮುಖ ಪುಸ್ತಕದಲ್ಲಿ ಸ್ನೇಹಿತರಂತೆ ವರ್ತಿಸುತ್ತೇವೆ..
ಮುಖಾಮುಖಿಯಾದಾಗ ಕಂಡೂ ಕಾಣದಂತೆ ಇರುತ್ತೇವೆ..
ವಾಟ್ಸಪ್ ನಲ್ಲಿನ ಜೋಕುಗಳಿಗೆ ಪ್ರತಿಕ್ರಿಯಿಸುತ್ತೇವೆ..
ಮಕ್ಕಳು ನಲಿಯುವುದನ್ನು ಕಂಡು ಗದರುತ್ತೇವೆ..
ಸಹೋದ್ಯೋಗಿಗಳೊಂದಿಗೆ ಕುಚೋದ್ಯ ಮಾಡಿ ನಗುತ್ತೇವೆ..
ಮನೆಯ ಸದಸ್ಯರೊಂದಿಗೆ ಗಂಭೀರವಾಗಿ ವರ್ತಿಸುತ್ತೇವೆ..
ಹೋಟೆಲ್ ನಲ್ಲಿ ಗಂಟೆಗಟ್ಟಲೆ ತಿಂಡಿಗೆ ಕಾಯತ್ತೇವೆ..
ಮನೆಯಲ್ಲಿ ಒಂದು ನಿಮಿಷ ತಡವಾದರೂ ಕಿರುಚಾಡುತ್ತೇವೆ..
ಬೆಲೆಬಾಳುವ ಬಟ್ಟೆಗಳನ್ನು ವಸ್ತುಗಳನ್ನು ಕೊಳ್ಳುತ್ತೇವೆ..
ಬಡವರಿಗೆ ಹತ್ತು ರೂ ದಾನ ಮಾಡಲು ಹಿಂಜರಿಯುತ್ತೇವೆ..
ನಮ್ಮ ತನವನ್ನು ಮರೆತು ಬೇರೆಯವರಿಗಾಗಿ ಬದುಕುತ್ತೇವೆ..
ನಮ್ಮ ಬೇರುಗಳನ್ನು ತೊರೆದು
ಪರಾವಲಂಬಿಗಳಂತೆ ಜೀವಿಸುತ್ತೇವೆ..
-ಪೂವಿಕೃ (confused)
Comments
Post a Comment