ಓ ಮಳೆಯೇ..

ಓ ಮಳೆಯೇ..
ಮೊದಲ ಹನಿಯಾಗಿ ಇಳೆಗೆ ತಾಕಿದಾಗ..
ನೀನೆಷ್ಟು ಘಮಘಮಿಸುವೆ..

ಓ ಮಳೆಯೇ..
ತುಂತುರು ತುಂತುರಾಗಿ ನೀ ಸುರಿದಾಗ..
ಅದೆಷ್ಟು ಆಹ್ಲಾದವೆನಿಸುವೆ..

ಓ ಮಳೆಯೇ..
ಗುಡುಗು ಸಿಡಿಲಿನೊಂದಿಗೆ ನೀ ಅಬ್ಬರಿಸಿದಾಗ..
ನೀನೆಷ್ಟು ಭಯಂಕರವಾಗಿರುವೆ..

ಓ ಮಳೆಯೇ..
ನೀ ಮಿತಿಯೊಳಗಿದ್ದರೆ ಬಹಳ ಹಿತವೆನಿಸುವೆ..
ನೀ ಮಿತಿಮೀರಿದಾಗ.. ಅಹಿತವೆನಿಸುವೆ..

ಓ ಮಳೆಯೇ
ನೀನಿಲ್ಲದಿದ್ದರೆ ಧರೆಗೆ ಹಸಿರೆಲ್ಲಿ?
ನೀನಿಲ್ಲದಿದ್ದರೆ ನಮಗೆ ತಣಿವೆಲ್ಲಿ?

ಓ ಮಳೆಯೇ..
ನಿನ್ನೊಂದಿಗಿನ ನೆನಪುಗಳೆಷ್ಟೋ..
ನಿನ್ನಿಂದ ಆದ ಫಜೀತಿಗಳೆಷ್ಟೋ..

ಓ ಮಳೆಯೇ
ಯಾರೇನೇ ಅನ್ನಲಿ ನೀ ಮುನಿಸಿಕೊಳ್ಳಬೇಡ..
ಯಾರೇನೇ ಹೇಳಲಿ ನೀ ಬಾರದಿರಬೇಡ..
ಯಾರೇನೇ ಹೇಳಲಿ ನೀ ಬಾರದಿರಬೇಡ..

-ಪೂವಿಕೃ

Comments

Popular Posts