ಋಣಿ

ಜನ್ಮವನಿತ್ತ ತಾಯಿ ತಂದೆಗೆ ನೀ ಋಣಿ
ವಿದ್ಯೆ ಕಲಿಸಿದ ಗುರುವಿಗೆ ನೀ ಋಣಿ
ಸಾಂತ್ವನ ನೀಡಲು ಹೆಗಲು ಕೊಟ್ಟ ಅಕ್ಕನಿಗೆ ನೀ ಋಣಿ
ಪ್ರತಿ ಹೆಜ್ಜೆಗೂ ಬೆಂಗಾವಲಾದ ಅಣ್ಣನಿಗೆ ನೀ ಋಣಿ
ಸಮಯಕ್ಕೆ ಒದಗಿದ ಸ್ನೇಹಿತನಿಗೆ ನೀ ಋಣಿ
ಆಪತ್ಕಾಲದಲ್ಲಿ ನೆರವಾದ ನೆರಹೊರೆಯವರಿಗೆ ನೀ ಋಣಿ
ಕಷ್ಟಸುಖದಲ್ಲಿ ಭಾಗಿಯಾದ ಬಂಧುವಿಗೆ ನೀ ಋಣಿ
ಜೀವನದಲ್ಲಿ ಸಮಪಾಲು ಪಡೆದ ಸಂಗಾತಿಗೆ ನೀ ಋಣಿ
ಬಾಳು ಬೆಳಗಿದ ಮಕ್ಕಳಿಗೆ ನೀ ಋಣಿ
ಭೂ ತಾಯಿಗೆ ನೀ ಋಣಿ
ಅನ್ನದಾತನಿಗೆ ನೀ ಋಣಿ
ತಿನ್ನುವ ಅನ್ನಕ್ಕೆ ನೀ ಋಣಿ
ಉಡುವ ಬಟ್ಟೆಗೆ ನೀ ಋಣಿ
ಈ ಎಲ್ಲವನ್ನೂ ಕೊಟ್ಟ ದೇವರಿಗೆ ನೀ ಚಿರಋಣಿ !!
ಅಬ್ಬಾ!! ಹೇಗೆ ತೀರಿಸಲಿ ಈ ಋಣದ ಗಣಿ?
ಲೆಕ್ಕಕ್ಕೆ ಸಿಗದ ಅಗಾಧವಾದ ಖಣಿ
ಹಣ ಕೊಟ್ಟರೆ ತೀರುವುದೇ ಈ ಋಣ?
ಹಣಕ್ಕಿಂತ ಮಿಗಿಲಾದುದಲ್ಲವೇ ಇದರ ಸ್ಥಾನ?
ಪ್ರೀತಿಯ ಋಣವ ಪ್ರೀತಿಯಂದಲೇ ತೀರಿಸಬೇಕು
ಸ್ನೇಹದ ಋಣವ ಸ್ನೇಹದಿಂದಲೇ ತೀರಿಸಬೇಕು
ಅದಕ್ಕೆ ಬೆಲೆ ಕಟ್ಟಿದರೆ ಅದು ಅಹಂಕಾರ
ಅದನ್ನು ಅರಿತು ಬಾಳುವುದು ನಮ್ಮ ಸಂಸ್ಕಾರ

                                        -ನಮಸ್ಕಾರ
                                        ಪೂವಿಕೃ 😊💐

Comments

Popular Posts