ಸಂಬಂಧ - ಋಣಾನುಬಂಧ

ನಾ ತಿಳಿದಿದ್ದೆ ಇದು ಬಿಡಿಸಲಾರದ ಬಂಧ
ಕೊಂಡಿಗಳು ಸೇರಿದಂತೆ ಬೆಸೆದ ಸಂಬಂಧ
ಭಾವನೆಗಳ ಪ್ರೀತಿಯ ಅನುಬಂಧ
ಬೆಲೆ ಕಟ್ಟಲಾಗದ ಅಮೂಲ್ಯ ಋಣಾನುಬಂಧ

ಆದರೆ ಈಗ ಅನ್ನಿಸುತಿದೆ ಇದು ಬರೀ ಭ್ರಾಂತಿ
ಒಂದೊಂದೆ ಕೊಂಡಿ ಕಳಚಿ ಮಾಡಿದೆ ದಿಗ್ಭ್ರಾಂತಿ
ತಿಳಿದಿದ್ದೆ ಅಂದು ನೀ ಮಾಡಿದ್ದೆಲ್ಲವೂ ಸ್ನೇಹದ ಸಂಕೇತ..
ಆದರೆ ದುಡ್ಡಿನಿಂದ ಅಳೆದು ನೀ ಬಹಳ ಸಣ್ಣವನಾದೆ.. ಇದು ಬೇಕಿತ್ತಾ?

ತಾಯಿ ಹೆತ್ತಾಗ ಪಟ್ಟ ನೋವನ್ನು ಎಷ್ಟು ಹಣ ಕೊಟ್ಟು ತೀರಿಸಬಲ್ಲೆ?
ಸಂಕಟಗೊಂಡಾಗ ಒರಗಲು ಕೊಟ್ಟ ಹೆಗಲಿಗೆ ಎಷ್ಟು ಬೆಲೆ??
ಬೆಳ್ಳಿ ಬಂಗಾರದಿಂದ ಅಳೆಯಲಾದೀತೇ ಸಂಬಂಧಗಳ ಎಳೆಯನ್ನು??
ತೀರಿಸಲಾದೀತೇ ಪ್ರತಿಯೊಬ್ಬರ ಋಣವನ್ನೂ??

ಹೆತ್ತಾ ತಾಯಿಯ ಋಣ ಹತ್ತು ಜನ್ಮಗಳಲ್ಲೂ ತೀರಿಸಲಾಗದು..
ಒಡಹುಟ್ಟಿದವರ ಋಣ ತೀರಿಸಲು ಈ ಜನ್ಮ ಸಾಲದು..
ಬಂಧುಗಳ ಋಣ ಸಂಬಂಧವಿರುವವರೆಗೂ ಕಳಚಿ ಹೋಗದು..
ಆದರೆ ಋಣವನ್ನೆಂದೂ ಅಳೆಯಲಾಗದು.. ಅಳಿಸಲಾಗದು!

ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ..
ಇರುವವರೆಗೂ ಹೊಂದಿಕೊಂಡಿರಬೇಕು ಎಲ್ಲಾ
ಸಾಕಾಗಿದೆ ಈ ಸಂಬಂಧಗಳ ಸುಳ್ಳು ಸರಪಳಿ
ಕಳಚಿ ಬಿದ್ದರೆ ಜೋಡಿಸಲಾಗದು.. ಈಗಲೇ ಎಚ್ಚೆತ್ತುಕೊಳ್ಳಿ!!
-ಪೂವಿಕೃ (ವಿಷಾದದೊಂದಿಗೆ)

Comments

Popular Posts