ಕೈ ಎತ್ತಿ ನೀಡುತ್ತಿದ್ದ ಜೀವ!

ಕೈ ಎತ್ತಿ ನೀಡುತ್ತಿದ್ದ ಜೀವ ಇಂದು ಕೈ ಚಾಚಿ ಮಲಗಿದೆ..
ದೇವರಿಗೆ ಹೂವಿಡದೆ ತಿಂಡಿ ತಿನ್ನದ ಜೀವ ಇಂದು ಬಾಯ್ಮುಚ್ಚಿ ಮಲಗಿದೆ..
ಎವೆಯಿಕ್ಕದೆ ನೋಡುತ್ತಿದ್ದ ಕಣ್ಣುಗಳು ಇಂದು ದಣಿದಂತೆ ಅರೆಮುಚ್ಚಿದೆ..
ತಟ್ಟಾಡಿದರೂ ಇಡುತ್ತಿದ್ದ ಹೆಜ್ಜೆ ಇಂದು ಅಲುಗಾಡದೇ ನಿಶ್ಚಲವಾಗಿದೆ..

ತಡವರಿಸಿ ಆಡುತ್ತಿದ್ದ ಮಾತು ಇಂದು ಮಾಯವಾಯಿತು..
ಮೂಗಿನಲ್ಲಾಡುತ್ತಿದ್ದ ಉಸಿರು ಗಂಟಲಿನಲ್ಲಿ ಕ್ಷೀಣವಾಯಿತು..
ಸದಾ ಕಾತರಿಸುತ್ತಿದ್ದ ಕಿವಿಗೆ ಇಂದು ಏನೂ ಕೇಳದಾಯಿತು..
ಸದಾ ಚೈತನ್ಯದಿಂದ ಇರುತ್ತದ್ದ ಜೀವ ಇಂದು ಮೂಲೆಯಲ್ಲಿ ಮುದುಡಿ ಮಲಗಿತ್ತು..

ಓ ದೇವರೇ ಆ ಜೀವಕ್ಕೆ ಪುನಃ ಚೈತನ್ಯ ನೀಡು
ಮನೆಯ ನಂದಾ ದೀಪವನ್ನು ಪುನಃ ಬೆಳಗಿಸು
ಕರುಣೆಯ ಬೆಳಕನ್ನು ನಮ್ಮೆಡೆಗೆ ಪಸರಿಸು
ಆ ಹಿರಿಯ ಜೀವಕ್ಕೆ ಆಯಸ್ಸು ನೀಡಿ ಹರಸು..

ಪೂವಿಕೃ

Comments

Popular Posts